ಗಂಗೊಳ್ಳಿ, ಡಿಸೆಂಬರ್ 23: ಸಾದಾ ಮಹಮ್ಮದ್ ನದೀಮ್ (25ವರ್ಷ) ತಂದೆ: ಸಾದಾ ಅಬುಬಕ್ಕರ್ ಬಾದ್ಷಾ ವಾಸ: ಎ.ಬಿ. ಮೆನ್ಸನ್, ಯೆಡ್ತರೆ ಗ್ರಾಮ ಬೈಂದೂರು, ಕುಂದಾಪುರ ತಾಲೂಕು ಎಂಬವರು ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ: ೨೧/೧೨/೦೯ ರಂದು ಅವರ ಅಕ್ಕನ ಮನೆಯಾದ ಗಂಗೊಳ್ಳಿಗೆ ಬಂದಿದ್ದು, ಅವರ ಗೆಳೆಯ ಪರ್ವೆಜ್ ಷಾ ರೊಂದಿಗೆ ಟಾಟಾ ಸುಮೋದಲ್ಲಿ ಶಾಹಿ ಮೊಹಲ್ಲಾ ಮಸೀದಿಗೆ ಪ್ರಾರ್ಥನೆಗೆ ಬಂದು, ಪ್ರಾರ್ಥನೆ ಮುಗಿಸಿ ಹೊರಗೆ ಬಂದು ಅವರ ಸಂಬಂಧಿಕರಿಗೆ ಮೊಬೈಲ್ನಲ್ಲಿ ಮಾತಾನಾಡುತ್ತಿರುವಾಗ ಒಮ್ಮಿ ಕಾರಿನಲ್ಲಿ ಜದೀಮ್ ಹಾಗೂ ಹನೀಫ್ ಹಾಗೂ ರಿಕ್ಷಾದಲ್ಲಿ ರಜಾಕ್ ಹಾಗೂ ಅಲ್ಲಿ ನಿಂತಿದ್ದ ನಬೀಲ್ ಎಂಬವರು ಒಟ್ಟು ಸೇರಿ ಸಾದಾ ಮಹಮ್ಮದ್ ನದೀಮ್ ರವರಿಗೆ ಹಿಂದೆ ಮುಂದಿನಿಂದ ಕಾಲಿನಿಂದ ತುಳಿದು ಕೈಗಳಿಂದ ಹೊಡೆದ ಪರಿಣಾಮ ಆಯಾತಪ್ಪಿ ಕೆಳಗೆ ಬಿದ್ದು ಬೊಬ್ಬೆ ಹಾಕಿದಾಗ ಮಸೀದಿಯಲ್ಲಿ ಇದ್ದವರು ಹೊರಗೆ ಬಂದಾಗ ಆರೋಪಿತರು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಸಾದಾ ಮಹಮ್ಮದ್ ನದೀಮ್ ರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ ೧೨೧/೦೯ ಕಲಂ ೩೨೩, ೫೦೬ ಜೊತೆಗೆ ೩೪ ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಯ ದಸ್ತಗಿರಿಯಾಗದೇ ಇರುವ ಕಾರಣ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ವರದಿ: ಇಬ್ರಾಹಿಂ, ಗಂಗೊಳ್ಳಿ.